ಮೌನದಿಂದ ಮಹಾನ್ ರಾಷ್ಟ್ರ ಕಟ್ಟಲು ಸಾಧ್ಯವಿಲ್ಲ; ಕೊಚ್ಚಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ | Rahul Gandhi

ಮೌನದಿಂದ ಮಹಾನ್ ರಾಷ್ಟ್ರ ಕಟ್ಟಲು ಸಾಧ್ಯವಿಲ್ಲ; ಕೊಚ್ಚಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಮೌನದಿಂದ ಮಹಾನ್ ರಾಷ್ಟ್ರ ಕಟ್ಟಲು ಸಾಧ್ಯವಿಲ್ಲ; ಕೊಚ್ಚಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
Published on
ತಿರುವನಂತಪುರಂ: ಮಹಾನ್ ರಾಷ್ಟ್ರಗಳನ್ನು ಮೌನದಿಂದ ನಿರ್ಮಿಸಲಾಗುವುದಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಸೋಮವಾರ (ಜ.19) ಹೇಳಿದ್ದಾರೆ. ಅಲ್ಲದೆ, ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮರೀನ್ ಡ್ರೈವ್‌ನಲ್ಲಿ ನಡೆದ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​, ದೇಶದ ಪ್ರಗತಿಗೆ ಪ್ರತಿಯೊಬ್ಬ ನಾಗರಿಕನ ಸಕ್ರಿಯರಾಗಬೇಕು. ಅಲ್ಲದೆ, ಆನ್ಯಾಯದ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ವಿಪಕ್ಷ ನಾಯಕ, ಅಧಿಕಾರದಿಂದ ಮೌನವಾಗಿರಲು ಜನರು ನಿರಾಕರಿಸಿದಾಗ ಮಾತ್ರ ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದುತ್ತದೆ. ಅಲ್ಲದೆ, ಭಾರತದ ಶಕ್ತಿ ಅದರ ಚಿಂತನೆಯ ವೈವಿಧ್ಯತೆ ಮತ್ತು ಚರ್ಚೆಗೆ ಅದರ ಇಚ್ಛಾಶಕ್ತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಮಹಾ ರಾಷ್ಟ್ರಗಳು ಮೌನ ವೀಕ್ಷಕರಿಂದ ನಿರ್ಮಿಸಲ್ಪಡುವುದಿಲ್ಲ. ಅಧಿಕಾರಕ್ಕೆ ಸತ್ಯವನ್ನು ಮಾತನಾಡುವವರ ಧೈರ್ಯದಿಂದ ಅವು ನಿರ್ಮಿಸಲ್ಪಡುತ್ತವೆ. ಅಲ್ಲದೆ, ಒಂದು ಸರ್ಕಾರವು ತನ್ನ ಯುವಕರನ್ನು, ತನ್ನ ರೈತರನ್ನು ಅಥವಾ ತನ್ನ ಸ್ಥಳೀಯ ನಾಯಕರನ್ನು ಮೌನಗೊಳಿಸಲು ಪ್ರಯತ್ನಿಸಿದಾಗ, ಅದು ರಾಷ್ಟ್ರವನ್ನು ನಿರ್ಮಿಸುತ್ತಿಲ್ಲ. ಅದು ಪಂಜರವನ್ನು ನಿರ್ಮಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್​ ಕಿಡಿಕಾರಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಗೆಲುವು ಕೇರಳದ ಜನರು ವಿಭಜಕ ಸಿದ್ಧಾಂತಗಳು ಮತ್ತು ಭ್ರಷ್ಟಾಚಾರ ವನ್ನು ತಿರಸ್ಕರಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸಿಪಿಐ(ಎಂ) ಮತ್ತು ಬಿಜೆಪಿ ಮೇಲೆ ರಾಹುಲ್​ ವಾಗ್ದಾಳಿ

ಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರದ ವಿರುದ್ಧ ತಿವ್ರ ವಾಗ್ದಾಳಿ ನಡೆಸಿದ ರಾಹುಲ್, ಶಬರಿಮಲೆ ತುಪ್ಪ ಪೂರೈಕೆಯಲ್ಲಿನ ಅಕ್ರಮಗಳು ಮತ್ತು ವ್ಯಾಪಕ ಆಡಳಿತಾತ್ಮಕ ವೈಫಲ್ಯಗಳು ಸೇರಿದಂತೆ ಇತ್ತೀಚಿನ ವಿವಾದಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಅಲ್ಲದೆ, ಸಿಪಿಐ(ಎಂ) ಕೇರಳದಲ್ಲಿ ಬಿಜೆಪಿಯ ಬಿ-ತಂಡದಂತೆ ಕಾರ್ಯನಿರ್ವಹಿಸುತ್ತದೆ ಎಂದು ರಾಹುಲ್​ ಗಾಂಧಿ ಆರೋಪಿಸಿದ್ದಾರೆ.

2026 ರ ಹಾದಿ

ಕೊಚ್ಚಿ ಭೇಟಿಯು ಕೇವಲ ಚುಣಾವಣೆಯ ತಂತ್ರವಾಗಿರಲಿಲ್ಲ. ಅಲ್ಲದೆ, ಸ್ಥಳವನ್ನು ತಲುಪುವ ಮೊದಲು, ರಾಹುಲ್​ ಪ್ರಸಿದ್ಧ ಸಾಹಿತ್ಯ ವಿಮರ್ಶಕ ಎಂ. ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಅಲ್ಲದೆ, ಲೀಲಾವತಿ ಅವರಿಗೆ ಪ್ರಿಯದರ್ಶಿನಿ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಇದು ಕೇರಳದ ಪ್ರಭಾವಿ ಬೌದ್ಧಿಕ ಸಮುದಾಯದೊಂದಿಗೆ ಸೇತುವೆ ನಿರ್ಮಾಣವಾಗಿದೆ.
ಮಹಾ ಪಂಚಾಯತ್ ರಾಜ್ಯಾದ್ಯಂತ ಜನ ಸಂಪರ್ಕ ಕಾರ್ಯಕ್ರಮದ ಆರಂಭವನ್ನು ಸೂಚಿಸುತ್ತದೆ. ಕೆ.ಸಿ. ವೇಣುಗೋಪಾಲ್ , ವಿ.ಡಿ. ಸತೀಶನ್ ಮತ್ತು ಸಚಿನ್ ಪೈಲಟ್ ಅವರಂತಹ ಹಿರಿಯ ನಾಯಕರು ಹಾಜರಿದ್ದರು. ಸ್ಥಳೀಯ ವಿಜಯಗಳನ್ನು ರಾಜ್ಯಾದ್ಯಂತ ಜನಾದೇಶವಾಗಿ ಪರಿವರ್ತಿಸುವ ಮೂಲಕ ಕಾಂಗ್ರೆಸ್ ಕೇರಳವನ್ನು ಮರಳಿ ಪಡೆಯಲು ಉದ್ದೇಶಿಸಿದೆ.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net